ಚುಟುಕುಗಳು

ನಾಯಿ ಬೆಕ್ಕು ಕುರಿ
ಹಚ್ಚಿ ದೊಡ್ಡ ಉರಿ
ಕಾಡು ತುಂಬ ಬೆಂಕಿ ಹತ್ತಿ
ಚಳಿ ಕಾಸಿತು ನರಿ!
***

ಡೊಳ್ಳು ಹೊಟ್ಟೆ ಗುಂಡ
ತಿನ್ನೋದ್ರಲ್ಲಿ ಭಂಡ,
ಕೇಳಿ ಕೇಳಿ ಹಾಕಿಸ್ಕೊಂಡು
ತಿಂದ ನೂರು ಬೋಂಡ.
***

ಊಟ ಗುಂಡಂಗ್ ಇಷ್ಟ
ಪಾಠ ಮಾತ್ರ ಕಷ್ಟ
ಕ್ಲಾಸಿನಲ್ಲಿ ಗೊರಕೆ ಹೊಡೆದು
ಭಾರೀ ಹೂಸು ಬಿಟ್ಟ!
***

ಬಿಸಿಲು ಬಿದ್ದಿದೆ – ಜೊತೆಗೆ
ಮಳೆ ಬರ್‍ತಿದೆ
ಕಾಗೆಗೂ ನರಿಗೂ ಎಲ್ಲೋ
ಮದುವೆ ಆಗ್ತಿದೆ!
***

ಉಂಡೆ ಉಂಡೆ ಉಂಡೆ
ತನ್ನಿ ಒಂದು ಹಂಡೆ
ಒಳಕ್ಕೆ ಇಳಿದು ತಿಂದ್ಹಾಕ್ತೀವಿ
ಇಡೇ ಸಂಡೇ ಮಂಡೆ
***

ಚಕ್ಲಿ ನಂಗೆ ಇಷ್ಟ
ಹೊರಕ್ ತರೋದೇ ಕಷ್ಟ
ರೌಡಿ ಗುಂಡ ಓಡಿ ಬಂದು
ಕಸ್ಕೋತಾನೆ ದುಷ್ಟ!
***

ಪುಟ್ಟ ಪುಟ್ಟ ರೊಟ್ಟಿ
ಬೆಣ್ಣೆ ಸವರಿ ತಟ್ಟಿ
ಕೊಡು ಅಜ್ಜಿ ಆಗ್ತೀನಿ
ಭೀಮಗಿಂತ ಗಟ್ಟಿ
***

ನನ್ನನ್ ಅಪ್ಕೊಂಡ್ ಮುದ್ಮಾಡೋದು
ಬಲೇ ಇಷ್ಟ ಅಜ್ಜಿಗೆ
ಅಜ್ಜಿ ಅಂದ್ರೆ ನಂಗಂತೂ
ಅನಾನಸ್ಸಿನ್ ಸಜ್ಜಿಗೆ
***

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಣ್ಣ ಸಂಗತಿ
Next post ಮಾತಿನಲಿ ಹೃದಯವಿರಲಿ

ಸಣ್ಣ ಕತೆ

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

cheap jordans|wholesale air max|wholesale jordans|wholesale jewelry|wholesale jerseys